ಒಲಂಪಿಯಾ ಅಮೇರಿಕಾದ ವಾಷಿಂಗ್ಟನ್ ರಾಜ್ಯದ ರಾಜಧಾನಿಯಾಗಿದೆ.ಇದು ಜನವರಿ 28, 1859 ರಂದು ನಗರವಾಯಿತು.2015 ರ ಜನಗಣತಿಯ ಪ್ರಕಾರ, ಅದರಲ್ಲಿ 50,302 ಜನ ವಾಸಿಸುತ್ತಿದ್ದಾರೆ.ಒಲಂಪಿಯಾದ ಜನರನ್ನು ಒಲಂಪಿಯನ್ ಎಂದು ಕರೆಯಲಾಗುತ್ತದೆ. == ಭೂಗೋಳ == ಒಲಂಪಿಯಾ 47 ° 2'33 "ಉತ್ತರ, 122 ° 53'35" ದಕ್ಷಿಣದಲ್ಲಿದೆ. (47.042418, -122.893077). ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ ಪ್ರಕಾರ, ನಗರದ ಒಟ್ಟು ವಿಸ್ತೀರ್ಣ 48.0 ಚದರ ಕಿಲೋಮೀಟರ್ (18.5 ಮೈ²). ಇದರ 43.3 ಕಿಮೀ² (16.7 ಮೈ²²) ಭೂಮಿ ಮತ್ತು 4.7 ಕಿಮೀ² (1.8 ಮೈ²²) ನೀರಿನಿಂದ ಆವರಿಸಿದೆ. ಒಟ್ಟು ನೀರಿನ ಪ್ರದೇಶ 9.77% . . == ಇತಿಹಾಸ == ಒಲಿಂಪಿಯದ ಬಳಿಯ ಟಮ್ವಾಟರ್ ಎಂಬಲ್ಲಿಗೆ ಅಮೆರಿಕನರು 1845ರಲ್ಲಿ ವಲಸೆ ಬಂದರು. ಆದರೆ 1849ರಲ್ಲಿ ಎಲ್ಲ ಜನರೂ ಕ್ಯಾಲಿಫೋರ್ನಿಯದ ಚಿನ್ನದ ಗಣಿ ಗಳಿಗೆ ನಡೆದು ಬಿಟ್ಟರು. 1850ರಲ್ಲಿ ಈಗಿನ ಒಲಿಂಪಿಯ ಪ್ರದೇಶದಲ್ಲಿ ನಗರವೊಂದು ಸ್ಥಾಪಿತ ವಾಯಿತು. ವಾಷಿಂಗ್ಟನ್ ಪ್ರದೇಶ ರಚನೆಯಾದಾಗ ಅದಕ್ಕೆ ಒಲಿಂಪಿಯ ರಾಜಧಾನಿಯಾಯಿತು (1853). ಇದಕ್ಕೆ ನಗರದ ಸನ್ನದು ದೊರೆತದ್ದು 1859ರಲ್ಲಿ. == ವ್ಯಾಪಾರ ವ್ಯವಹಾರ == ಪ್ರತಿವರ್ಷವೂ ಸುಮಾರು 5,00,000 ಟನ್ಗಳಷ್ಟು ಸರಕು ಒಲಿಂಪಿಯ ಬಂದರಿನ ಮೂಲಕ ಸಾಗುತ್ತದೆ. ಮರದ ದಿಮ್ಮಿ, ಪ್ಲೈವುಡ್, ಅರಣ್ಯಸಾಮಗ್ರಿ, ಅದರುಗಳು, ಪೆಟ್ರೋಲಿಯಂ ಪದಾರ್ಥಗಳು, ಪಾನೀಯಗಳು, ಶಸ್ತ್ರಾಸ್ತ್ರ ಮತ್ತು ಸಂಸ್ಕರಿಸಿದ ಆಹಾರಗಳು ಇಲ್ಲಿಂದ ರಫ್ತಾಗುತ್ತವೆ. == ಟಿಪ್ಪಣಿಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == , , & ", , ..." . Encyclopædia (11th .). 1911. {{ }}: : |= |HIDE_PARAMETER= () ಒಲಂಪಿಯಾ, ವಾಷಿಂಗ್ಟನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ , , 2018-01-08 ವೇಬ್ಯಾಕ್ ಮೆಷಿನ್ ನಲ್ಲಿ.